ಇಲಾಖೆಯ ಹಿನ್ನೆಲೆ

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು 1996ರ ಸೆಪ್ಟೆಂಬರ್ ನಲ್ಲಿ ಸ್ಥಾಪನೆಯಾಯಿತು.  ರಾಜ್ಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಆಧಾರದ ಮೇಲೆ ಮೂಲಸೌಲಭ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ವಿವಿಧ ಇಲಾಖೆಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಪಿಪಿಪಿ ಮಾದರಿಯ ಅನುಷ್ಠಾನವನ್ನು ಸುಗಮಗೊಳಿಸುವುದು, ಸ್ವಿಸ್‌ ಚಾಲೆಂಜ್‌ ಆಧಾರದ ಮೇಲೆ ಕಾರ್ಯನಿವಹಿಸುವುದು, ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ಮತ್ತು ಕಿರು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದು, ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯೊಂದಿಗೆ   ಸಮನ್ವಯ   ಸಾಧಿಸುವುದು ಹಾಗೂ ಇತರೆ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ-ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲು ರಾಜ್ಯದಲ್ಲಿ ನೋಡಲ್‌ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದು.

 


   

ಇತ್ತೀಚಿನ ನವೀಕರಣ​ : 17-08-2019 12:24 PM ಅನುಮೋದಕರು: IDD Department