ಅಭಿಪ್ರಾಯ / ಸಲಹೆಗಳು

ಪರಿಚಯ

 ಸಮುದ್ರ ಬಂದರುಗಳು ದೇಶಗಳ ನಡುವಿನ ಸರಕುಗಳ ವ್ಯಾಪಾರಕ್ಕೆ ಪ್ರಮುಖ ಹೆಚ್ಚಾಗಿದೆ. ಸರಕುಗಳ ಆರ್ಥಿಕ ಸಾಗಣೆಯಲ್ಲಿನ ಚಟುವಟಿಕೆಗಳ ಲಾಜಿಸ್ಟಿಕ್‌ ಸರಪಳಿಯಲ್ಲಿ ಬಂದರುಗಳು ಪ್ರಮುಖ ಮೂಲಸೌಕರ್ಯವನ್ನು ರೂಪಿಸುತ್ತವೆ. ಭಾರತದಲ್ಲಿ ಲಭ್ಯವಿರುವ ಬಂದರುಗಳ ಸಾಮರ್ಥ್ಯ ಮತ್ತು ಬಂದರು ಸೇವೆಗಳಿಗೆ ಭಾರಿ ಬೇಡಿಕೆಯ ನಡುವೆ ದೊಡ್ಡ ಅಂತರವಿದೆ ಎಂಬುದು ಒಪ್ಪಿತ ಸತ್ಯ.

 

ಭಾರತದಲ್ಲಿ, ಸಾಗರ ಸಾಗಣೆಯು ರಪ್ತು- ಆಮದು ಸರಕುಗಳ ಅತ್ಯಧಿಕ ಮೋಡಲ್‌ ಪಾಲನ್ನು ಹೊಂದಿದೆ. ಸಮುದ್ರದ ಮಾರ್ಗಗಳು ಹೆಚ್ಚಿನ ಪ್ರಮಾಣದ ಸರಕುಗಳನ್ನು ಸಾಗಿಸುವ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಾಯಕ ವಿಧಾನವನ್ನು ಒದಗಿಸುತ್ತವೆ. ಶಿಪ್ಪಿಂಗ್‌ ಸಚಿವಾಲಯದ ಅಂದಾಜಿನ ಪ್ರಕಾರ, ಪ್ರಸ್ತುತ ಮಟ್ಟದಿಂದ 2020-21 ರ ವೇಳೆಗೆ ಸಮುದ್ರ ಬಂದರುಗಳಲ್ಲಿನ ದಟ್ಟಣೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.

 

ಭಾರತೀಯ ಕರಾವಳಿಯಲ್ಲಿ ಸರಕು ದಟ್ಟಣೆ ಹೆಚ್ಚುತ್ತಿರುವುದರಿಂದ, ಸರಕುಗಳನನು ಕೇಂದ್ರೀಕರಿಸಿ ಉತ್ತಮ ಗುಣಮಟ್ಟದ ಬಂದರು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯ 31.03.2019 ರಂತೆ, ಭಾರತದ ಪ್ರಮುಖ ಬಂದರುಗಳಲ್ಲಿ ಸರಕು ಸಂಚಾರವನ್ನು  ನಿರ್ವಹಿಸಲು ಒಟ್ಟು 344 ಬರ್ತ್‌ಗೆ, 9   ಸಿಂಗಲ್‌ ಬಾಯ್‌ ಮೂರಿಂಗ್‌ಗಳನ್ನು ಮತ್ತು ಎರಡು ಬಾರ್ಜ್‌ ಜೆಟ್ಟಿಗಳಿವೆ. ಪ್ರಮುಖವಲ್ಲದ ಬಂದರುಗಳನ್ನು ಒಳಗೊಂಡಂತೆ 300 ಕ್ಕೂ ಹೆಚ್ಚು ಬರ್ತ್‌ಗಳನ್ನು ಹೊಂದಿರುತ್ತದೆ. ಭಾರತೀಯ ಬಂದರುಗಳ ಹೆಚ್ಚಾಗಿ ವಿವಿಧೋದ್ದೇಶ ಬರ್ತಿಂಗ್‌ ನಿಂದ (ಸರಿ ಸುಮಾರು 60% ) ಪ್ರಾಬಲ್ಯವನ್ನು ಹೊಂದಿದೆ ಎಂದು ಗಮನಿಸಬೇಕು.

 

ಕರ್ನಾಟಕ ರಾಜ್ಯವು 150 ನಾಟಿಕಲ್‌ ಮೈಲ್‌ಗಳಷ್ಟು (300 ಕಿ.ಮಿ) ಕಡಲ ತೀರವನ್ನು ಹೊಂದಿದೆ. ಇದು ಉತ್ತರದಲ್ಲಿ ಕಾರವಾರ ಮತ್ತು ದಕ್ಷಿಣದಲ್ಲಿ ಮಂಗಳೂರು ಸೇರಿದಂತೆ ಒಟ್ಟು 12 ಸಣ್ಣ ಬಂದರುಗಳಿಂದ ಕೂಡಿದೆ. ರಾಜ್ಯದ ಕರಾವಳಿಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುತ್ತುವರೆದಿದೆ. ರಾಜ್ಯದ 12ಬಂದರುಗಳಾದ ಕಾರವಾರ, ಬೇಲಿಕೇರಿ ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ (ಗಂಗೊಳ್ಳಿ) ಹಂಗಾರಕಟ್ಟಾ, ಮಲ್ಪೆ, ಪಡುಬಿದ್ರಿ ಮತ್ತು ಹಳೇ ಮಂಗಳೂರು ಇವುಗಳ ಪೈಕಿ ಕಾರವಾರ ಮಾತ್ರ ಏಕೈಕ ಸರ್ವಋತು ಬಂದರಾಗಿದ್ದು, ಉಳಿದ ಕಿರು ಬಂದರುಗಳು, ಎಂಕರೇಜ್‌ / ಲೈಟರೇಜ್‌ ಬಂದರುಗಳಾಗಿ ಕಾರ್ಯನಿರ್ವಹಿಸುತ್ತಿದೆ.

 

ಇತ್ತೀಚಿನ ನವೀಕರಣ​ : 23-04-2021 12:14 PM ಅನುಮೋದಕರು: IDD Department



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080