ಅಭಿಪ್ರಾಯ / ಸಲಹೆಗಳು

ಪಿಪಿಪಿಯ ಬಗ್ಗೆ

ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಎನ್ನುವುದು ಒಂದು ಸಾರ್ವಜನಿಕ ವಲಯದ ಸಂಸ್ಥೆ / ಪುರಸಭೆ ಮತ್ತು ಖಾಸಗಿ ಸಂಸ್ಥೆ ನಡುವಿನ ಒಪ್ಪಂದವಾಗಿದೆ. ಇದರಲ್ಲಿ ಖಾಸಗಿ ಸಂಸ್ಥೆಯು ವಿನ್ಯಾಸ, ಆರ್ಥಿಕ, ನಿರ್ಮಾಣ ಮತ್ತು ಕಾರ್ಯಾಚರಣೆಗಳಲ್ಲಿ ಗಣನೀಯ ಆರ್ಥಿಕ, ತಾಂತ್ರಿಕ ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಯನ್ನು ಹೊಂದಿರುತ್ತದೆ.
 
ಸಾಂಪ್ರದಾಯಿಕವಾಗಿ, ಖಾಸಗಿ ವಲಯದ ಭಾಗವಹಿಸುವಿಕೆಯು ಪ್ರತ್ಯೇಕ ಯೋಜನೆ, ವಿನ್ಯಾಸ ಅಥವಾ ನಿರ್ಮಾಣ ಒಪ್ಪಂದಗಳಿಗೆ ಸೇವಾ ಆಧಾರದ ಶುಲ್ಕದ ಮೇಲೆ ಸೀಮಿತವಾಗಿದೆ. ಇದು ಸಾರ್ವಜನಿಕ ಸಂಸ್ಥೆಗಳ ವಿಶೇಷಣಗಳ ಮೇಲೆ ಆಧಾರಿತವಾಗಿದೆ.
 
ಖಾಸಗಿ ವಲಯದ ಪಾತ್ರವನ್ನು ವಿಸ್ತರಿಸುವುದರಿಂದ ಖಾಸಗಿ ಸಂಸ್ಥೆಗಳು ತಾಂತ್ರಿಕ, ಮ್ಯಾನೇಜ್ಮೆಂಟ್ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೊಂದಲು ಮತ್ತು ಕೆಲವು ಸಾರ್ವಜನಿಕ ಸಂಸ್ಥೆಯ ಗುರಿಗಳಾದ ಹೆಚ್ಚಿನ ವೆಚ್ಚ ಹಾಗೂ ವೇಳಾಪಟ್ಟಿ ನಿಶ್ಚಿತತೆ ಸಾಧಿಸಲು, ಆಂತರಿಕ-ಸಿಬ್ಬಂದಿ, ನವೀನ ತಂತ್ರಜ್ಞಾನದ ಅನ್ವಯಿಕೆಗಳನ್ನು, ವಿಶೇಷ ಪರಿಣತಿ ಅಥವಾ ಖಾಸಗಿ ಬಂಡವಾಳ ಆಕರ್ಷಿಸಲು ಅವಕಾಶ ಕಲ್ಪಿಸುತ್ತದೆ. ಖಾಸಗಿ ಪಾಲುದಾರರು ಹೊಸ ಅಥವಾ ವಿಸ್ತರಿತ ಮತ್ತು ಅನಿಶ್ಚಿತತೆ ಜವಾಬ್ದಾರಿಗಳನ್ನು ಹೊಂದುವುದರಿಂದ ತನ್ನ ವ್ಯವಹಾರ ಅವಕಾಶಗಳನ್ನು ಹೆಚ್ಚಿಸಬಹುದು.
 
ಪಿಪಿಪಿ ಯೋಜನೆಗಳ ಜವಾಬ್ದಾರಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡುತ್ತವೆ. ಯಾವ ಸಂಸ್ಥೆಗಳು ಚಟುವಟಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿಬೇಕಾದ ಫಲಿತಾಂಶವನ್ನು ನೀಡುವ ಅರ್ಹತೆ ಹೊಂದಿರುತ್ತದೆಯೋ ಅವುಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡುತ್ತವೆ. ಪಿಪಿಪಿ ಯೋಜನೆಗಳ ಪಾತ್ರಗಳು, ಅನಿಶ್ಚಿತತೆ ಮತ್ತು ಪ್ರತಿಫಲಗಳು ಕರಾರಿನಲ್ಲಿ ಸೂಚಿಸುವ ಮೂಲಕ ಸಾಧಿಸಲಾಗುತ್ತದೆ. ಆದ್ದರಿಂದ ಗರಿಷ್ಟ ಸಾಧನೆ ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಬೇಕಾದ ಉತ್ತೇಜನಗಳನ್ನು ಒದಗಿಸುವುದು.
 
ಯಾವುದು ಪಿಪಿಪಿ ಆಗಿರುವುದಿಲ್ಲ?
 
ಪಿಪಿಪಿ ವ್ಯಾಖ್ಯಾನವು ಇದನ್ನು ಸ್ಪಷ್ಟಪಡಿಸುತ್ತದೆ:
 •  ಪಿಪಿಪಿಯ ಕಾರ್ಯಗಳು ಸರಳ ಹೊರಗುತ್ತಿಗೆ ಅಲ್ಲ. ಅದರಲ್ಲಿ ಗಣನೀಯ ಆರ್ಥಿಕ, ತಾಂತ್ರಿಕ ಮತ್ತು ಕಾರ್ಯಾಚರಣೆಯ ಅನಿಶ್ಚಿತತೆಯನ್ನು ಖಾಸಗಿ ಸಂಸ್ಥೆಯು ಉಳಿಸಿಕೊಳ್ಳುತ್ತದೆ.
 •  ಸಾರ್ವಜನಿಕ ಸಂಸ್ಥೆಗೆ ಖಾಸಗಿ ಸಂಸ್ಥೆಯಿಂದ ಪಿಪಿಪಿಯು ದೇಣಿಗೆಯಲ್ಲ.
 •  ಪಿಪಿಪಿಯು ಒಂದು ಸಾರ್ವಜನಿಕ ಸ್ವಾಮ್ಯದ ಉದ್ಯಮವನ್ನು ರಚಿಸುವ ಮೂಲಕ ಸಾರ್ವಜನಿಕ ಕಾರ್ಯಚಟುವಟಿಕೆಯ ವಾಣಿಜ್ಯಕರಣವಲ್ಲ.
 •  ಪಿಪಿಪಿಯು ರಾಜ್ಯದಿಂದ ಯಾವುದೇ ಸಾಲವಾಗಿರುವುದಿಲ್ಲ.

ಇತ್ತೀಚಿನ ನವೀಕರಣ​ : 18-08-2023 04:40 PM ಅನುಮೋದಕರು: IDD Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080