ಅಭಿಪ್ರಾಯ / ಸಲಹೆಗಳು

ಸಾಂಸ್ಥಿಕ ಪಾತ್ರ ಮತ್ತು ಜವಾಬ್ದಾರಿಗಳು

 
 
 

ಸರ್ಕಾರ / ಸರ್ಕಾರ. ಏಜೆನ್ಸಿ / ಸಂಸ್ಥೆ

ಪ್ರಮುಖ ಕಾರ್ಯಗಳು

ಕರ್ನಾಟಕ ಸರ್ಕಾರ

 1. ನೀತಿ ಕ್ರಮಗಳ ರಚನೆ ಮತ್ತು ವಿಮರ್ಶೆ
 2. ನೀತಿ ಕ್ರಮಗಳ ಸಾಮಾನ್ಯ ಆಡಳಿತ
 3. ಯೋಜನಾ ಅನುಷ್ಠಾನಕ್ಕೆ ಅನುಕೂಲವಾಗುವಂತೆ ವಿವಿಧ ಇಲಾಖೆಗಳ ನಡುವೆ ಸಹಕಾರ
 4. ಕಾರ್ಯಕ್ಷಮತೆಯ ಮೌಲ್ಯಮಾಪನ

 

ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ, ಕೆಎಸ್ಐಐಐಡಿಸಿ ಯ ಸಹಯೋಗದೊಂದಿಗೆ (ಜಿಓಕೆ)

 1. ನೀತಿ ಮಟ್ಟದ ಉಪಕ್ರಮಗಳೊಂದಿಗೆ ಸಹಕಾರ
 2. ಪಿಪಿಪಿ ಮೂಲಕ ಅನುಷ್ಠಾನಗೊಳಿಸುವ   ಎಲ್ಲಾ ಮೂಲಸೌಲಭ್ಯ ಯೋಜನೆಗಳ ಪ್ರಸ್ತಾಪಗಳ ಮೌಲ್ಯಮಾಪನಕ್ಕಾಗಿ ಎಸ್ ಎಲ್ ಎಸ್ ಡಬ್ಯೂ ಎ    ಮತ್ತು ಎಸ್ ಎಚ್ ಎಲ್ ಸಿ ಸಿ ಗಳೊಂದಿಗೆ  ಸಹಕರಿಸುವುದು.
 3. ಪಿಪಿಪಿ ಯೋಜನೆಗಳಿಗೆ ಸಂಬಂಧಿಸಿದ ನೀತಿ, ತಾಂತ್ರಿಕ, ಕಾನೂನು ಮತ್ತು ಪಿಪಿಪಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಮತ್ತು ಇತರ ಯೋಜನಾ ವಿಷಯಗಳನ್ನು ನಿರ್ವಹಿಸಲು ಒಂದು ನೀತಿ ವಿಭಾಗವನ್ನು ಸ್ಥಾಪಿಸುವುದು. ನೀತಿ ವಿಭಾಗವು ಸೂಕ್ತವಾದ ಮತ್ತು ಅನುಭವಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುತ್ತದೆ.
 4. ಪಿಪಿಪಿ ನೀತಿಗಳು ಮತ್ತು ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ನೋಡಲ್ ಏಜೆನ್ಸಿಯಂತೆ ಕಾರ್ಯನಿರ್ವಹಿಸುವುದು ಮತ್ತು ಈ ನೀತಿಗಳನ್ನು ಯೋಜನೆಗಳಲ್ಲಿ ಪರಿಗಣಿಸಲು ಹಾಗೂ ಅಳವಡಿಸಿಕೊಳ್ಳಲು ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡಲ್ಪಡುತ್ತದೆ;
 5. ಯೋಜನೆಗಳ ಪರಿಕಲ್ಪನೆ ಮತ್ತು ಅವುಗಳನ್ನು ಗುರುತಿಸಲು ಮತ್ತು ಅವು ರಾಜ್ಯದ ಉದ್ದೇಶಗಳಿಗೆ  ಅನುಸಾರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲ್ಪಡುತ್ತದೆ;
 6. ಸರ್ಕಾರಕ್ಕೆ ಯೋಜನೆಗಳ ಕುರಿತು ಸೂಚನೆ ನೀಡಲು, ಮತ್ತು ಯೋಜನೆಗಳ ಅಗತ್ಯಗಳಿಗೆ  ಅವಶ್ಯವಿರುವ ಶಿಫಾರಸುಗಳನ್ನು ಅಥವಾ ಸಲಹೆಗಳನ್ನು ನೀಡುವುದು;
 7. ಹಣಕಾಸು, ನಿರ್ಮಾಣ, ನಿರ್ವಹಣೆ ಮತ್ತು ಯೋಜನೆಗಳ ಕಾರ್ಯಾಚರಣೆಯಲ್ಲಿ ಖಾಸಗಿ ವಲಯದ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು;
 8. ಸರ್ಕಾರದ ಅಂತರ ಇಲಾಖೆಯ / ಏಜೆನ್ಸಿಗಳ ನಡುವೆ ಸಹಕರಿಸುವುದು;
 9. ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆ ಮತ್ತು ಸು-ಮೋಟೋ ಪ್ರಸ್ತಾಪಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿದ್ದಲ್ಲಿ ತಿದ್ದುಪಡಿಯನ್ನು ಒದಗಿಸುವುದು;
 10. ಆದ್ಯತಾನುಸಾರ ಯೋಜನೆಗಳನ್ನು ಕೈಗೊಳ್ಳಲು ಮತ್ತು ಅನುಷ್ಠಾನಕ್ಕೆ  ಬೇಕಾದ ಅಗತ್ಯ ಯೋಜನೆಗಳ ಪಟ್ಟಿಯನ್ನು ತಯಾರಿಸುವುದು;
 11. ಅಂತರ-ವಲಯ ಸಂಬಂಧಗಳನ್ನು ಗುರುತಿಸುವುದು;
 12. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗಳು ಅಥವಾ ಪರವಾನಗಿಗಳ ಅಗತ್ಯವಿರುವ ಮೂಲಸೌಲಭ್ಯ ಯೋಜನೆಗಳ ಪ್ರಚಾರದ ವಿಷಯಗಳಲ್ಲಿ ಶಿಫಾರಸುಗಳನ್ನು ಮಾಡಲು ಅಪ್ರೇಸಲ್ ಸೆಲ್ ಅನ್ನು ಸ್ಥಾಪಿಸುವುದು.
 13. ಯೋಜನೆಯ ಪ್ರಸ್ತಾಪಗಳು ಮತ್ತು ಇತರ ಪರಿಗಣನೆಗಳನ್ನು ವಿಮರ್ಶಿಸಿ  ಅನುಮೋದಿಸುವುದು ಅಥವಾ ನಿರಾಕರಿಸುವುದು.
 14. ಹಣದ ಮೌಲ್ಯ ಮತ್ತು ಇದೇ ರೀತಿಯ ಇತರ ಪರಿಗಣನೆಗಳ ಆಧಾರದ ಮೇಲೆ ರಿಯಾಯಿತಿ ಒಪ್ಪಂದಗಳನ್ನು ವಿಮರ್ಶಿಸಿ ಸೂಕ್ತ ತಿದ್ದುಪಡಿಗಳನ್ನು ಮತ್ತು ಮಾರ್ಪಾಡುಗಳನ್ನು ಸೂಚಿಸುವುದು;
 15. ಕರ್ನಾಟಕ ವೈಯಾಬಿಲಿಟಿ ಗ್ಯಾಪ್ ಫಂಡ್ ಯೋಜನೆ ಅಡಿಯಲ್ಲಿ ಆರ್ಥಿಕ ಬೆಂಬಲವನ್ನು ನಿರ್ಧರಿಸಲು ಮತ್ತು ಯೋಜನೆಗಳ ನಿಧಿಯ ವಿತರಣೆಯನ್ನು ಅನುಮೋದಿಸಲು ಸಹಕರಿಸುವುದು;
 16. ಸ್ವಿಸ್-ಚಾಲೆಂಜ್ ವಿಧಾನದ ಮೂಲಕ ಕೈಗೊಳ್ಳಲಾದ ಯೋಜನೆಯೊಂದನ್ನು ಅಥವಾ ಸುಯೋ-ಮೋಟೋ ಪ್ರಸ್ತಾಪದ ಪ್ರಮಾಣ ಮತ್ತು ವ್ಯಾಪ್ತಿಯನ್ನು  ಅನುಮೋದಿಸಲು ಮತ್ತು ಅಗತ್ಯವಿದ್ದರೆ ಹಣಕಾಸಿನೇತರ ರೀತಿಯ ಮಾರ್ಪಾಡುಗಳನ್ನು ಶಿಫಾರಸು ಮಾಡುವುದು;
 17. ಯೋಜನೆಯ ಅನುಮೋದನೆ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು
 1.  ಯೋಜನೆಯ ಅಡಿಯಲ್ಲಿ ವಿಜಿಎಫ್ ಅನುಮೋದನೆಗೆ ಸಂಬಂಧಿಸಿದ ವಿಷಯಗಳಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರದೊಂದಿಗೆ ಸಹಕರಿಸುವುದು
 2. ಕಾಲಕಾಲಕ್ಕೆ ಮೂಲಸೌಲಭ್ಯ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಮತ್ತು ಮೌಲ್ಯಮಾಪನದಲ್ಲಿಮತ್ತು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಆಕರ್ಷಿಸುವಲ್ಲಿನ ಮೇಲ್ವಿಚಾರಣಾ ಕಾರ್ಯಕ್ರಮ ಸೇರಿದಂತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳು / ಏಜೆನ್ಸಿಗಳೊಂದಿಗೆ ಸಹಕರಿಸುವುದು.

     r. ಇತರ ಅನ್ವಯಿಸುವ ಕಾನೂನುಗಳಿಗೆ ಅಸಮಂಜಸವಾಗಿಲ್ಲದೆ, ಯಾವುದೇ ಯೋಜನೆಗೆ ಅನುಮತಿಗಾಗಿ ಸಮಯ ಮಿತಿಯನ್ನು ಸೂಚಿಸಿ ಮತ್ತು ಶಾಸನಬದ್ಧ ಮತ್ತು ಇತರ ಅನುಮತಿಗಳನ್ನು ಮತ್ತು ಅನುಮೋದನೆಗಳನ್ನು ಸಕಾಲಿಕವಾಗಿ ಪಡೆಯುವಲ್ಲಿ ರಿಯಾಯಿತಿದಾರರಿಗೆ ಸಹಾಯ ಮಾಡುವುದು;

     s. ನಿಯತಕಾಲಿಕವಾಗಿ ಸ್ಪಷ್ಟತೆಗಳ ಸ್ಥಿತಿಯನ್ನು ಪರಿಶೀಲಿಸುವುದು;

     t. ಮೂಲಸೌಲಭ್ಯ ವಲಯಗಳಿಗೆ  ಮಾದರಿ ದಾಖಲೆಗಳು / ಒಪ್ಪಂದಗಳನ್ನು ಅಭಿವೃದ್ಧಿಪಡಿಸಲು;

     u. ಭಾರತದ ಸರ್ಕಾರದ ಸಂಬಂಧಿತ ಯೋಜನೆ (ಗಳು) ಅಡಿಯಲ್ಲಿ ಕಾರ್ಯಸಾಧ್ಯತೆ ಗ್ಯಾಪ್ ನಿಧಿಯ ಅನುದಾನಕ್ಕಾಗಿ ಯೋಜನೆಗಳನ್ನು ಶಿಫಾರಸು ಮಾಡಲು;

     v. ಪಿಪಿಪಿ ಯೋಜನೆಗಳ ಅನುಷ್ಠಾನ, ಕಾಮಗಾರಿಯ,  ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಯದಲ್ಲಿ ಯೋಜನೆಗಳ ವಿರ್ಮಶೆ ಮತ್ತು ಮೌಲ್ಯಮಾಪನ ಮಾಡುವುದು;

     w. ನಿಧಿ ಮತ್ತು ಅದರ ಸ್ವತ್ತುಗಳನ್ನು ನಿರ್ವಹಿಸಲು ಮತ್ತು ನಿಭಾಹಿಸಲು ಸಹಕರಿಸುವುದು;

ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ

 

ರೂ. 500 ಕೋಟಿಗೂ ಮೇಲ್ಪಟ್ಟ ಪಿಪಿಪಿ ಯೋಜನೆಗಳನ್ನು ಅನುಮೋದಿಸಲು ಸಹಕರಿಸುವುದು

ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ

ರೂ. 500 ಕೋಟಿ ವೆಚ್ಚದ ಎಲ್ಲಾ ಪಿಪಿಪಿ ಯೋಜನೆಗಳನ್ನು ಅನುಮೋದಿಸಲು ಮತ್ತು ಪರಿಶೀಲಿಸಲು ಸಹಕರಿಸುವುದು

ಜಿಲ್ಲಾ ಪಿಪಿಪಿ ಸಮಿತಿ

 1. ಯೋಜನೆಯ ಗುರುತಿಸುವಿಕೆ, ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಸೂಕ್ತ ಅನುಕೂಲ ಕಲ್ಪಿಸುವುದು
 2. ವಿವಿಧ ಇಲಾಖೆಗಳ ನಡುವೆ ಸಹಕಾರವನ್ನು ಕಲ್ಪಿಸುವುದು
 3. ಅನುಮತಿಗಳನ್ನು ಮತ್ತು ಅನುಮೋದನೆಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಸಹಕರಿಸುವುದು
 

ಇತ್ತೀಚಿನ ನವೀಕರಣ​ : 18-08-2023 04:42 PM ಅನುಮೋದಕರು: IDD Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080